ಈ ಲೇಖನವನ್ನು ನಕ್ಷತ್ರ ಲೇಖನಕ್ಕೆ ಸ್ಥಳಾಂತರಿಸಿದೆ == ಪೀಠಿಕೆ == ಈ ವಿಶ್ವದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ ಅಥವಾ 1200-2000ಕೋಟಿ ವರ್ಷಗಳ ಹಿಂದೆ ಪ್ರಾರಂಭ ಆಗಿರಬೇಕೆಂದು ವಿಜ್ಞಾನಿಗಳು ತರ್ಕಿಸಿದ್ದರು. ಆದರೆ ಇತ್ತೀಚಿನ ಸಂಶೋಧನೆಗಳ ನಂತರ ನಮ್ಮ ವಿಶ್ವದ ವಿಕಾಸದ ಆರಂಭ ಸುಮಾರು 13.75ಬಿಲಿಯನ್ ಅಥವಾ 1375± 0.11% ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರ ಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ. ಆ ಆರಂಭದ ಕ್ಷಣವನ್ನು ಮಹಾಸ್ಪೋಟವೆದು ಕರೆದಿದ್ದಾರೆ. ಆದ್ದರಿಂದ ಮಹಾಸ್ಪೋಟದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು 1375 (±11%) ಕೋಟಿ ವರ್ಷ,ಯಾ 1378 ವರ್ಷ ಎಂದು ಹೇಳಬಹುದು. ಆ ಒಂದು ಸೂಕ್ಷ್ಮಾತಿ ಸೂಕ್ಷ್ಮ ಉಪಕಣ ಪ್ರಭಾಣು (ಫೋಟಾನ್-(ಪ್ರೋಟಾನಿನ ಒಳಗಿನ ಬೀಜಗಳಲ್ಲೊಂದು) ಸ್ಪೋಟಗೊಂಡು ಕೆಲವೇ ಸೆಕೆಂಡಿನಲ್ಲಿ ಅಗಾಧ ಶಾಖದಿಂದ ಕುದಿದು 30 ನಿಮಿಷಗಳಲ್ಲಿ ಕುದಿಯುತ್ತಿರುವ ದೊಡ್ಡ ಪ್ಲಾಸ್ಮಾದ ಉಂಡೆಯಾಗಿ, ಕ್ರಮೇಣ ಶಾಖವನ್ನು ಕಡಿಮೆ ಮಾಡಿಕೊಳ್ಳತ್ತಾ ಕಡಿಮೆ ಮಾಡಿಕೊಳ್ಳತ್ತಾ ಈ ವಿಶಾಲ ವಿಶ್ವದ ಮತ್ತು ಅದರಲ್ಲಿ ತುಂಬಿರುವ ಕೋಟಿ ಕೋಟಿ ಬ್ರಹ್ಮಾಂಡಗಳ ರಚನೆಗೆ ಕಾಣವಾಯಿತು. ಒಂದೊಂದು ಬ್ರಹ್ಮಾಂಡದಲ್ಲಿಯೂ ಕೋಟಿ ಕೋಟಿ ನಕ್ಷತ್ರಗಳಿವೆ. ನಾವಿರುವ ಎಂದರೆ ನಮ್ಮ ಸೂರ್ಯ ಅಥವಾ ಸೌರಮಂಡಲವಿರುವ ಈ ಬ್ರಹ್ಮಾಂಡಕ್ಕೆ ಆಕಾಶಗಂಗೆ ಅಥವಾ ಕ್ಷೀರಪಥವೆಂದು ಕರೆಯುವರು. ಈ ನಮ್ಮ ಕ್ಷೀರಪಥವೆಂಬ ಬ್ರಹ್ಮಾಂಡದಲ್ಲಿ ಸುಮಾರು 200 ರಿಂದ 400 ಶತಕೋಟಿಗಳ ನಡುವಿನ ಸಂಖ್ಯೆಯ ನಕ್ಷತ್ರಗಳು ಇವೆ; ಮತ್ತು ಅದು ಕನಿಷ್ಠ 100 ಶತಕೋಟಿ (ಬಿಲಿಯನ್) ಗ್ರಹಗಳನ್ನು ಹೊಂದಿದೆ. ನಿಖರತೆಯು ಕಷ್ಟ, ವಿಶೇಷವಾಗಿ ದೂರದಲ್ಲಿರುವ ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳನ್ನು ಅವಲಂಬಿಸಿದೆ(ಸೂರ್ಯನ ಸ್ಥಾನ:[[೧]] ಸೂರ್ಯನೂ ಒಂದು ಮದ್ಯಮ ಗಾತ್ರದ ಮಧ್ಯ ವಯಸ್ಸಿನ ನಕ್ಷತ್ರ. ಅವನ ಜನನವೂ ಮಹಾಸ್ಪೋಟದ ಸುಮಾರು 850ಕೋಟಿ ವರ್ಷಗಳ ನಂತರ ಆಗಿದೆ.ಸೌರವ್ಯೂಹವು ಒಂದು ದೈತ್ಯ ಅಂತರತಾರಾ ಆಣ್ವಿಕ ಮೋಡದ ( ) ಗುರುತ್ವ ಕುಸಿತದಿಂದ 4.6 ಶತಕೋಟಿ ವರ್ಷಗಳ ಹಿಂದೆ (4.568 ಶತಕೋಟಿ ವರ್ಷಗಳ ಹಿಂದೆ) ರೂಪುಗೊಂಡಿತು ಎಂದು ಭಾವಿಸಲಾಗಿದೆ-(ಸುಮಾರು 500ಕೋಟಿ). == ನಕ್ಷತ್ರಗಳ ಜನನ == ನಕ್ಷತ್ರವೊಂದು ಹುಟ್ಟುವುದು ಅನೇಕ ಸಹಸ್ರ ಸಂವತ್ಸರಗಳ ಕ್ರಿಯೆ. ಈ ಕ್ರಿಯೆ ಕೆಲವೇ ಹಂತಗಳಲ್ಲಿ ಸಾಗುತ್ತವೆ. ಸೂರ್ಯನೇ ಭೂಮಿಗೆ ಹತ್ತಿರದ ನಕ್ಷತ್ರ. ಅದು ಒಂದು ಮಧ್ಯಮ ಗಾತ್ರದ ತಾರೆ ತನ್ನ ಗುರುತ್ವದಿಂದಲೇ ಒಟ್ಟುಗೂಡಿದ ಪ್ಲಾಸ್ಮಾದ ಹೊಳೆಯುವ ಗೋಳ. ಇತರ ಅನೇಕ ನಕ್ಷತ್ರಗಳು ಭೂಮಿಯಿಂದ ಬರಿಗಣ್ಣಿಗೆ ರಾತ್ರಿ ಸಮಯದಲ್ಲಿ ಅಪಾರ ವೇಗದ ಚಲನೆ ಇದ್ದರೂ ಹೊಳೆಯುವ ಆಕಾಶದಲ್ಲಿ ಸ್ಥಿರ ಬಂದುಗಳಂತೆ ಕಾಣಿಸುತ್ತವೆ. ಕಾರಣ ಅವು ಭೂಮಿಯಿಂದ ಅಪಾರ ದೂರ ಇವೆ. ನಕ್ಷತ್ರದ ಮೊದಲ ರೂಪ ಜ್ಯೋತಿರ್ಮೇಘ (). ಈ ಜ್ಯೋತಿರ್ಮೇಘವು ಧೂಳು, ಜಲಜನಕ, ಹೀಲಿಯಮ್ ಮತ್ತು ಇತರ ಅಯಾನೀಕೃತ ಅನಿಲಗಳ ಒಂದು ಅಂತರತಾರಾ ಮೋಡವು. ಒಂದು ನಕ್ಷತ್ರದ ಜೀವನದ ಆರಂಭ-ಜನನವು ಜ್ಯೋತಿರ್ಮೇಘದ ಕುಸಿತದಿಂದ ಆಗುತ್ತದೆ. ಜ್ಯೋತಿರ್ಮೇಘವು ಭಾರವಾದ ಮೂಲವಸ್ತುಗಳಾದ ಹೀಲಿಯಂ ಮತ್ತು ಪ್ರಾಥಮಿಕವಾಗಿ ಅತ್ಯಲ್ಪ ಪ್ರಮಾಣದಲ್ಲಿ ಜಲಜನಕವನ್ನು ಒಳಗೊಂಡಿರುತ್ತದೆ. ಯಾವಾಗ ನಾಕ್ಷತ್ರಿಕ ಅನಿಲರೋಪದ ಜ್ಯೋತಿರ್ಮೇಘದ ಒಳಭಾಗವು ಸಾಕಷ್ಟು ದಟ್ಟವಾದ ಗುರುತ್ವದ ಕಾರಣ ಕುಸಿತ ಆರಂಭವಾದಾಗ, ಪರಮಾಣು ಸಮ್ಮಿಳನ ಮೂಲಕ ಹೈಡ್ರೋಜನ್ ತಡೆಯಿಲ್ಲದೆ ಹೀಲಿಯಂ ಆಗಿ ಪರಿವರ್ತಿತವಾಗುತ್ತದೆ. ಈ ಪರಿವರ್ತನೆ ಪ್ರಕ್ರಿಯೆಯಲ್ಲಿ ಶಕ್ತಿಯು ಬಿಡುಗಡೆ ಆಗುತ್ತದೆ. ನಕ್ಷತ್ರದ ಆಂತರಿಕ ಭಾಗದಲ್ಲಿ ಉಳಿದ ವಿಕಿರಣ ಮತ್ತು ಸಂವಾಹಕ ಶಾಖದ ವರ್ಗಾವಣೆಯ ವಿಧಾನಗಳನ ಮೂಲಕ ಕೇಂದ್ರ ಬೀಜದಿಂದ (ಕೋರ್) ಬಿಡುಗಡೆಯಾದ ಶಕ್ತಿಯನ್ನು ದೂರ ಒಯ್ಯುತ್ತದೆ. ನಕ್ಷತ್ರದ ಆಂತರಿಕ ಒತ್ತಡ ಅದರ ಗುರುತ್ವದಿಂದ ಅದು ಮತ್ತಷ್ಟು ಕುಸಿತ ಉಂಟಾಗುವುದನ್ನು ತಡೆಯುತ್ತದೆ. ಯಾವಾಗ ಅಂತರಂಗದಲ್ಲಿ ಜಲಜನಕ ಇಂಧನ ಬರಿದಾಗಿರುತ್ತದೆಯೋ ಆಗ ದ್ರವ್ಯರಾಶಿ ಸೂರ್ಯನ 0.4 ರಷ್ಟು ಹೆಚ್ಚಿನ ಪ್ರಮಾಣದ್ದಾಗುತ್ತದೆಯೋ, ಆಗ ಅದು ಕೆಂಪು ದೈತ್ಯ ಆಗಲು ಹಿಗ್ಗುತ್ತದೆ. ನಕ್ಷತ್ರ ಕೆಲವು ಸಂದರ್ಭಗಳಲ್ಲಿ, ಬೀಜದ ಭಾರವಾದ ದ್ರವ್ಯರಾಶಿಯನ್ನು ಒಳಬೀಜದ ಸುತ್ತಲೂ ತೊಗಟೆ ಅಥವಾ ಚಿಪ್ಪುಗಳನ್ನಾಗಿ ಪರಿವರ್ತಿಸುತ್ತದೆ. ಹೀಗೆ ಅದು ಒಂದು ದೈತ್ಯ ಅಂತರತಾರಾ ಆಣ್ವಿಕ ಮೋಡದ ( ) ಗುರುತ್ವ ಕುಸಿತದಿಂದ ಉಂಟಾಗುವುದು. == ಜ್ಯೋತಿರ್ಮೇಘ == ನಮ್ಮ ಕ್ಷೀರಪಥದಲ್ಲಿಯೇ ಅಂಚಿನಲ್ಲಿರುವ ಭೂಮಿಗೆ ಹತ್ತಿರವಿರುವ ಒರಿಯನ್ ಜ್ಯೋತಿರ್ಮೇಘ (ನೆಬುಲ) { - 42, M42, 1976)} ನಮ್ಮಿಂದ 1,344 ± 20 ಜ್ಯೋತಿರ್ವರ್ಷಗಳು ದೂರವಿದೆ. ಅದು 24 ಜ್ಯೋತಿರ್ವರ್ಷಗಳ ವಿಸ್ತಾರ ಇರಬಹುದು ಎಂದು ಗಣಿಸಲಾಗಿದೆ. ಅದು ನಮಗೆ ಕಾಣುವ ಅತ್ಯಂತ ಪ್ರಕಾಶಮಾನ ಜ್ಯೋತಿರ್ಮೇಘ.ಓರಿಯನ್ ನಕ್ಷತ್ರಪುಂಜದ ದಕ್ಷಿಣ ಓರಿಯನ್ನ ಬೆಲ್ಟ್ ಎಂಬಲ್ಲಿ ಓರಿಯನ್' ಜ್ಯೋತಿರ್ಮೇಘವಿದೆ. ಇದು ಒಟ್ಟು ಸೂರ್ಯನ ದ್ರವ್ಯರಾಶಿಯ 2000 ದಷ್ಟು ದ್ರವ್ಯರಾಶಿ ಹೊಂದಿರುವ ಜ್ಯೋತಿರ್ಮೇಘ. ಇದು ಹೆಲಿಕ್ಸ್ ನೆಬುಲ ( 7293,), 700 ಜ್ಯೋತಿರ್ವರ್ಷ ದೂರದಲಿದ್ದು 2.5 ಜ್ಯೋತಿರ್ವರ್ಷ ವಿಸ್ತೀರ್ಣ ಹೊಂದಿದೆ. ಇವುಗಳ ಅಗಾಧವಾದ ವ್ಯಾಪ್ತಿ ಹಾಗು ವಸ್ತು ಪ್ರಮಾಣ, ತೀವ್ರ ಗುರುತ್ವಾಕರ್ಷಣೆಯನ್ನು ಸೃಷ್ಟಿ ಮಾಡುತ್ತದೆ. ಇದೇ ನಕ್ಷತ್ರದಲ್ಲಿ ಶಕ್ತಿಯ ಉಗಮಕ್ಕೆ ನಾಂದಿ. == ತಾರಾ ಬೆಳವಣಿಗೆಯ ಪ್ರಕ್ರಿಯೆ == ಒಂದು ಭ್ರೂಣನಕ್ಷತ್ರ (ಪ್ರೋಟೊಸ್ಟಾರ್ - ) ಒಂದು ಚಿಕ್ಕ ನಕ್ಷತ್ರ. ಅದು ಪೋಷಕ ಆಣ್ವಿಕ ಮೋಡವನ್ನು( .) ಒಟ್ಟಾಗಿ ಜೋಡಿಸಲು ಆರಂಭಿಸಿರುತ್ತದೆ. ಭ್ರೂಣಾವಸ್ತೆಯ ಹಂತದ ನಾಕ್ಷತ್ರಿಕ ವಿಕಸನ ಪ್ರಕ್ರಿಯೆಯಲ್ಲಿ ಮೊದಲ ಹಂತವಾಗಿದೆ. [1] ಒಂದು ಸೌರ ದ್ರವ್ಯರಾಶಿಯ ನಕ್ಷತ್ರವು ಅದರ ವಿಕಸನಕ್ಕೆ ತೆಗೆದುಕೊಳ್ಳುವ ಕಾಲ 1,000,000 ವರ್ಷಗಳ ಅವಧಿಯದ್ದಾಗಿರುತ್ತದೆ. ಈ ಹಂತವು ಆಣ್ವಿಕ ಮೋಡದ ಮೊದಲ ಸ್ವಯಂ ಗುರುತ್ವ ಬಲದಿಂದ ಕುಸಿದಾಗ ಆರಂಭವಾಗುತ್ತದೆ. ಈ ಭ್ರೂಣ ತಾರೆ (ಪ್ರೋಟೊಸ್ಟಾರ್) ಒಳಬೀಳುವ ಅನಿಲವನ್ನು ಮತ್ತೆ ಹೊರ ಚಿಮ್ಮುತ್ತದೆ ಮತ್ತು ನಂತರ ಕಣ್ಣಿಗೆ ಕಾಣುವ ‘ಪೂರ್ವ ಮುಖ್ಯ ಅನುಕ್ರಮ ತಾರೆ’ ಆಗುವುದು. ನಂತರ ಒಂದು ಗೋಚರ ಪ್ರಧಾನ ಅನುಕ್ರಮ ತಾರೆಯಾಗಿ ಈ ಸರಣಿ ಕ್ರಿಯೆ ಕೊನೆಗೊಳ್ಳುತ್ತದೆ. ಅಂತ್ಯ:ನಕ್ಷತ್ರ ಹಿಗ್ಗಿದಂತೆ ತನ್ನ ಕೆಲವು ಭಾಗ ದ್ರವ್ಯರಾಸಿಯ ಅಂಶಗಳನ್ನು, ಅಂತರತಾರಾ ಪರಿಸರಕ್ಕೆ, ಎಸೆಯುತ್ತದೆ. ಅದು ನಂತರ ಮರುಬಳಕೆಯ ಪ್ರಕ್ರಿಯೆಯಿಂದ ಹೊಸ ನಕ್ಷತ್ರಗಳ ಉಗಮಕ್ಕೆ ಕಾರಣವಾಗುತ್ತದೆ. ಏತನ್ಮಧ್ಯೆ, ನಕ್ಷತ್ರದ ಬೀಜ ಒಂದು ನಾಕ್ಷತ್ರಿಕ ಅವಶೇಷ ಆಗುತ್ತದೆ. ಅದು ಒಂದು ವೈಟ್ ಡ್ವಾರ್ಫ್ ಆಗಬಹುದು, ಇಲ್ಲವೇ ನ್ಯೂಟ್ರಾನ್ ನಕ್ಷತ್ರವಾಗಬಹುದು, ಅಥವಾ ಸಾಕಷ್ಟು ಅಗಾಧ ಪ್ರಮಾಣದಲ್ಲಿ ದ್ರವ್ಯರಾಸಿ ಇದ್ದಲ್ಲಿ ಒಂದು ಕಪ್ಪು ಕುಳಿಯಾಗಬಹುದು. . == ನೋಡಿ == -ನಕ್ಷತ್ರಪುಂಜ//ನಕ್ಷತ್ರ//ನಕ್ಷತ್ರಕೂಟ//xxನಕ್ಷತ್ರ ಸಮೂಹxx// ಕ್ಷುದ್ರಗ್ರಹ ಹೊನಲು//ಸೆಂಟಾರ್ ಗ್ರಹಾಭ// ಕ್ಷುದ್ರಗ್ರಹಗಳ ಮೇಲೆ ವಸಾಹತು //ಅವಶೇಷ ತಟ್ಟೆ//ಮುಖ್ಯ ಹೊನಲಿನ ಧೂಮಕೇತು//ಟ್ರೋಜನ್ ಕ್ಷುದ್ರಗ್ರಹ (ಇವುಗಳನ್ನೆಲ್ಲಾ ಸರಿಪಡಿಸುವ/ವ್ಯಾಖ್ಯಾನಿಸುವ ಅಗತ್ಯವಿದೆ) == ಉಲ್ಲೇಖಗಳು ==